ಕನ್ನಡಕ್ಕೆ ವಿಧು ವಿನೋದ್‍ ಚೋಪ್ರಾ ನಿರ್ದೇಶನದ`12th ಫೇಲ್‍`ಚಿತ್ರ ಕೆ ಆರ್ ಜಿ ಸ್ಟುಡಿಯೋಸ್‍ನಿಂದ ಕರ್ನಾಟಕದಲ್ಲಿ ವಿತರಣೆ; ಅ.27ಕ್ಕೆ ಬಿಡುಗಡೆ
Posted date: 03 Tue, Oct 2023 08:02:09 AM
ಕರ್ನಾಟಕದ ಜನತೆಗೆ ಗುಣಮಟ್ಟದ ಚಿತ್ರಗಳನ್ನು ತಲುಪಿಸುವ ನಿಟ್ಟಿನಲ್ಲಿ ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್‍ ಯಾವತ್ತೂ ಮುಂಚೂಣಿಯಲ್ಲಿದ್ದು, ಈ ಸಂಬಂಧ ಹೊಸ ಹೆಜ್ಜೆ ಇಟ್ಟಿದೆ. `ಪರಿಂದಾ`, `1942 ಎ ಲವ್‍ ಸ್ಟೋರಿ` ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ `ಮುನ್ನಾಭಾಯ್‍` ಸರಣಿಯ ನಿರ್ಮಾಪಕರಾದ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ವಿಧು ವಿನೋದ್‍ ಚೋಪ್ರಾ ಅವರೊಂದಿಗೆ ಇದೀಗ ಕಾರ್ತಿಕ್‍ ಗೌಡ ಮತ್ತು ಯೋಗಿ ಜಿ ರಾಜ್‍ ಒಡೆತನದ ಕೆ ಆರ್ ಜಿ ಸ್ಟುಡಿಯೋಸ್‍ ಕೈಜೋಡಿಸಿದೆ. ವಿಧು ವಿನೋದ್‍ ಚೋಪ್ರಾ ಅವರ `12th ಫೇಲ್‍` ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ಅ. 27ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. 
 
`12th ಫೇಲ್‍` ಚಿತ್ರವು ಅನುರಾಗ್‍ ಪಾಠಕ್‍ ಅವರ ಅದೇ ಹೆಸರಿನ ಜನಪ್ರಿಯ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್‍ ಆಗಿ, ಅಸಾಧ್ಯವನ್ನು ಸಾಧ್ಯವನ್ನಾಗಿಸಿದ ಐಪಿಎಸ್ ಅ‍ಧಿಕಾರಿ ಮನೋಜ್‍ ಕುಮಾರ್ ಶರ್ಮಾ ಅವರ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ `ಎ ಡೆಥ್‍ ಇನ್‍ ದಿ ಗುಂಜ್‍`, `ಚಪಾಕ್‍`, `ಹಸೀನ್‍ ದಿಲ್ರುಬಾ`ಮುಂತಾದ ಚಿತ್ರಗಳ ಖ್ಯಾತಿಯ ವಿಕ್ರಾಂತ್ ಮಾಸ್ಸೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed